ನಾಯಕ ನಟರ ಅವಸ್ಥೆ:
ರವಿಚಂದ್ರನ್ ಇನ್ನೂ ಪ್ರೀತಿ ಪ್ರೇಮದಲ್ಲಿ ಹೊರಳಾಡುತ್ತಿದ್ದಾರೆ ದರ್ಶನ್ ಲಾಂಗು ಮಚ್ಚಿನ ರಾಯಭಾರಿ ಆಗಿದ್ದಾರೆ. ಸುದೀಪ್ ಇನ್ನೂ ಪಾತ್ರಗಳ ಆಯ್ಕೆಗಾಗಿ ಪರದಾಡುತ್ತಿದ್ದಾರೆ. ಅಂಬಿಯಂಥಹ ಹಳೆ ಹುಲಿಗಳು ಮೂಲೆಗೆ ಸರಿದಾಗಿದೆ. ಗಣೇಶ ಪಾಪ ತನ್ನ ಹಳೆಯ ಸ್ಟೈಲನ್ನು ಬಿಡದೆ ತಲೆಗೂದಲು ತೆಗೆಯದೆ ಮನೆಯಲ್ಲಿ ಕುಳಿತಿದ್ದಾನೆ. ಯೋಗಿಯಂಥಹ ಜನರನ್ನು ಅದು ಹೇಗೆ ಜನರು ಪರದೆಯಲ್ಲಿ ನೋಡುತ್ತಾರೋ ಏನೋ. ದುನಿಯಾ ವಿಜಯ್ ಅಂಗ ಸಾಧನೆಯಲ್ಲಿ ಗಮನ ಹರಿಸಿ ನಟನಾಗಿ ಸೋತಿದ್ದಾರೆ. ಉಪೇಂದ್ರ ನಿರ್ದೇಶಕನಾಗಿ ಸೈ ಎನಿಸಿರಬಹುದು. ಆದರೆ ನಟನಾಗಿ ಆತ ಏನೂ ಕರಗತ ಮಾಡಿಲ್ಲ. ಶಿವಣ್ಣನ ಫಾರ್ವರ್ಡ್ ಮೆಸೇಜ್ಗಳನ್ನೂ ನೋಡಿ ಕನ್ನಡ ಸಿನೆಮ ನೋಡದ ಪ್ರೇಕ್ಷಕನೂ ತಲೆ ತಲೆ ಚಚ್ಚುತ್ತಿದ್ದಾನೆ. ಇನ್ನು ಪುನೀತ್ ತಕ್ಕ ಮಟ್ಟಿಗೆ ಪಾತ್ರಗಳ ಆಯ್ಕೆಯಲ್ಲಿ ಮುಂದಿದ್ದರೂ ಆತನ ಸದ್ಯದ ರಿಲೀಸ್ಗಳು ನೈಜತೆಯಿಂದ ಕೂಡಿಲ್ಲ.
ನಿರ್ದೇಶಕರ ಅವಸ್ಥೆ:
ಕನ್ನಡದ ಈಗಿನ ಹಿಟ್ ನಿರ್ದೇಶಕರು ಯಾವುದೇ ವೈವಿಧ್ಯಥೆಯಿಲ್ಲದ ಚಿತ್ರಗಳನ್ನೇ ಕೊಡುತ್ತಿದ್ದಾರೆ. ಯೋಗರಾಜ ಭಟ್ಟರ ಸಿನೆಮಾಗಳಲ್ಲಿ ತಲೆಕೆಡುವ ಡಯಲಾಗ್ ತುಂಬಿದ್ದರೆ ಸೂರಿ ಆಕ್ಷನ್ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಉತ್ತಮ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ತಮ್ಮ ಚಿತ್ರಗಳನ್ನು ಕೇವಲ ಅವಾರ್ಡ್ಗೆ ಸೀಮಿಥಗೊಲಿಸಿದ್ದರೆ. ಎಸ್ ನಾರಾಯಣ್ ಮೀಸೆಯ ಮೆಲಾಷ್ಟೇ ಗಮನ ಹರಿಸುತ್ತಿದ್ದಾರೆ. ಉಳಿದ
ಹೊಸ ನಿರ್ದೇಶಕರು ಹುಡುಗರ ಜಮಾನ ಎಂದು ಅಸಹ್ಯ ಸಿನೆಮಾಗಳನ್ನು ಮಾಡುತ್ತಾ ಫ್ಲಾಪ್ಗಳ ಸಂಖ್ಯೆ ಹೆಚ್ಚಿಸುವ ಬದಲು ಉತ್ತಮ ನಿರ್ದೇಶಕರ ಜೊತೆಯಲ್ಲಿ assistant ಆಗಿ ಕೆಲಸ ಮಾಡಬೇಕು. ಹಿಟ್ ಆದ ಸಿನೆಮಾದ ಶೈಲಿಯನ್ನು ಮುಂದುವರಿಸುವ ನಟರ ಚಾಳಿಯನ್ನು ನಿಲ್ಲಿಸಬೇಕು. ಇಲ್ಲವಾದರೆ ಆ ಗಣೇಶ, ಪ್ರೇಮ್, ಅಜಯ್ ಮುಂತಾದವರ ಮುಖದ ಹಾವ ಭಾವ ಬದಲಾಗದು.
ನಟಿಯರ ಅವಸ್ಥೆ:
ಇನ್ನು ನಟೀಮಣಿಯರ ಬಗ್ಗೆ ಹೇಳದಿರುವುದೇ ವಾಸಿ. ಕನ್ನಡ ಪದಗಳನ್ನು ಹೇಳಲು ತಡಕಾಡುವ ಅವರನ್ನು ಅದು ಹೇಗೆ ನಿರ್ದೇಶಕರು ನಿಭಾಯಿಸುತ್ತಾರೋ ಏನೋ. ಸುಮ್ಮನೆ ಪ್ರೊಡ್ಯುಸರ್ನೊಂದಿಗೆ ಹಾಗು ನಿರ್ದೇಶಕರೊಂದಿಗೆ ಜಗಳವಾಡುತ್ತಾ ಕಾಲ ಕಳೆಯುವ, ಮೈಮಾಟದಲ್ಲೇ ಕಲೆಯನ್ನು ಕಾಣುವ ಹಲವಾರು ನಾಯಕಿಯರು ಈಗಲೂ ಕನ್ನಡ ಚಿತ್ರರಂಗದಲ್ಲಿದ್ದಾರೆ.
ಪ್ರೇಕ್ಷಕರ ಅವಸ್ಥೆ:
ಯಾವ ಸಿನೆಮಾಗಳೂ ಮಿನಿಮಮ್ ಗ್ಯಾರಂಟಿಯನ್ನು ಹೊಂದಿಲ್ಲ. ಫಸ್ಟ್ ಶೋ ನೋಡುವವರನ್ನು ಮೆಚ್ಚಲೇಬೇಕು. ಮೈಲಾರಿ ಹಿಟ್ ಎಂದು ಕೇಳಿ ನೋಡಲು ಹೋದ ನನ್ನ ಚಿಕ್ಕಪ್ಪ ಮತ್ತು ಫ್ಯಾಮಿಲಿ ಬಂದು ಅದನ್ನು ಬೈದದ್ದು, ಜಾಕಿ ನೋಡಿ ಬೈದ ನನ್ನ ಭಾವ, ಪಂಚರಂಗಿ ನೋಡಿ ತಲೆ ಕೆಟ್ಟ ಗೆಳೆಯನನ್ನು ಕಂಡಾಗ ಈ ಹಿಟ್ಗಳ ಬಗ್ಗೆಯೂ ಒಂದು ಸಂಶಯ ಬರುತ್ತದೆ. ಪ್ರೇಕ್ಷಕ ವರ್ಗ ಸಾಧಾರಣ ಸಿನೆಮಾಗಳಲ್ಲಿ ತೃಪ್ತಿ ಪಡುತ್ತಾನೋ, ಇಲ್ಲ ಸಿನೆಮ ಉತ್ತಮವಾಗಿ ಮೂಡಿ ಬರುತ್ತಾ ಇದೆಯೋ ಎಂದು ತಿಳಿಯದಾಗಿದೆ. ಆ ಪ್ರೇಕ್ಷಕ ಸಮೂಹ ಅದು ಯಾವ ಧೈರ್ಯದಲ್ಲಿ ಥಿಯೇಟರ್ ಕಡೆಗೆ ಹೆಜ್ಜೆ ಹಾಕುತ್ತಾರೆ ಎಂಬುದು ರಹಸ್ಯವಾಗಿಯೇ ಉಳಿದಿದೆ.
೨೦೧೦ರ ಚಿತ್ರಗಳು:
೨೦೧೦ರಲ್ಲಿ ತೆರೆಕಂಡ ಕನ್ನಡ ಸಿನೆಮಾಗಳಲ್ಲಿ ಬೆರಳೆಣಿಕೆಯ ಸಿನಿಮಾಗಳು ಮಾತ್ರ ಗಲ್ಲ ಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದರೆ ಬಾಕಿ ಉಳಿದವು ಪ್ರೊಡ್ಯೂಸರಿನ ಬೊಕ್ಕಸ ಖಾಲಿಯಾಗಿಸಿದುವು. ಜಾಕಿ, ಪಂಚರಂಗಿ, ಆಪ್ತ ರಕ್ಷಕ, ಕನೆಸೆಂಬ ಕುದುರೆಯನೇರಿ, ಪೃಥ್ವಿ, ತಮಸ್ಸು, ಸೂಪರ್, ಕೃಷ್ಣನ್ ಲವ್ ಸ್ಟೋರಿ, ಮತ್ತೆ ಮುಂಗಾರು, ಮೈಲಾರಿ, ನಾನು ನನ್ನ ಕನಸು,ವೀರ ಪರಂಪರೆ, ಎರಡನೇ ಮದುವೆ ಮುಂತಾದವುಗಳು ಪ್ರೇಕ್ಷಕನ ಪ್ರಶಂಸೆಗೆ ಪಾತ್ರವಾಗಿದ್ದು ಇವುಗಳಲ್ಲಿ ಕೆಲವು ಹಿಟ್ ಲಿಸ್ಟ್ಗೆ ಸೇರಿವೆ. ಆದರೆ ಒಟ್ಟು ೧೨೦ ಸಿನೆಮ ೨೦೧೦ರಲ್ಲಿ ತೆರೆ ಕಂಡಿವೆ ಎಂಬುದನ್ನು ಗಮನಿಸಬೇಕು. ಆದರೂ ಕಳೆದ ೨-೩ ವರ್ಷಗಳಿಗೆ ಹೋಲಿಸಿದರೆ ಕೆಲವು ನೋದಥಕ್ಕ ಸಿನೆಮಾಗಳು ತೆರೆ ಕಂಡಿವೆ.
ಕೊನೆಯದಾಗಿ:
ಪರಬಾಷೆ ಚಿತ್ರಗಳನ್ನು ಕಾಪಿ ಮಾಡುವುದನ್ನು ಬಿಟ್ಟು ಅವರಂತೆ ಕ್ರೀಯಾತ್ಮಕವಾಗಿ ಚಿಂತಿಸಲು ಹೊರಟರೆ ಉತ್ತಮ.
Tuesday, January 4, 2011
Subscribe to:
Post Comments (Atom)
1 comment:
You are really a talented. You have achieved the many goals, i wish this time you will also get the success.
gods own country
Post a Comment